ಶುಕ್ರವಾರ, ಏಪ್ರಿಲ್ 3, 2020

ಕೊರೋನಾ ಸೋಂಕು ಕುರಿತ ಜಾಗೃತಿ ಗೀತೆ


ಕೋರಿಕೆ
('ಕೊರೋನಾ ಸೋಂಕು' ಕುರಿತು ಜಾಗೃತಿ ಗೀತೆ)
~~~~~~~~~~~~~~~~~~~~~~~~~~~~~~
ಲಾಲಲಲಲಲಾಲ....
ಲಾಲಲಾಲಲಾಲಾ.... ಲಾಲಲಾಲಲಾಲಾ....
ಲಾಲಲಾಲಲಾ.... ಹೇ... ಲಲಲಲಲಾಲ.

ಹೇಳುವೆ ನಿಮಗೀಗ,
ವೈರಿ ಕೊರೊನಾ ಬಂದು, ಬೀದಿಯಲ್ಲಿ ನಿಂದು,
ಬಾ... ಎನುತಿದೆ... ಹೋ....ಹೊರಗೆ ಬರದಿರೋಣ. ||ಪ||

ಸೀನಿದರೂ ಬರುತೈತಿ, ಕೆಮ್ಮಿದರೂ ಬರುತೈತಿ
ಅದಕಾಗೇ ಮಾಸ್ಕು ಧರಿಸಿರಿ|
ಬಾಯಿ, ಮೂಗು, ಕಣ್ಣುಗಳ ಮುಟ್ಟದೆಯೆ ಸುಮ್ಮನಿರಿ
ಆಗಾಗ ಕೈ ತೊಳೆಯುತ್ತಿರಿ|
ಚೈನಾದ ಈ ಸೋಂಕು, ಬಂದಿದೆ ಭಾರತಕೂ
ಹೊಡೆದೋಡಿಸೋ ಛಲದಿಂದಿರಿ ಬರಲಾರದೇ ಹೊರಗೆ...||
                                              ||ಹೇಳುವೆ ನಿಮಗೀಗ||

ಮಕ್ಕಳ ಜೊತೆ ಮಾತಾಡ್ತಾ, ಅವರೊಂದಿಗೆ ಆಡಾಡ್ತಾ,
ಮನೆಗೆಲಸ ಮಾಡುತಿರೋಣ|
ಹಿರಿಯರ ಕಥೆ ಕೇಳುತ್ತ, ನೀತಿಯನು ಕಲಿಸುತ್ತ
ಸಂಸ್ಕೃತಿಯ ಉಳಿಸೋಣ|
ಇದು ಒಳ್ಳೆಯ ನಿಲುವು, ನಮ್ ದೇಶಕೇ ಗೆಲುವು
ಮನೆಯಲ್ಲಿಯೇ ಎಲ್ಲರೊಂದಿಗೆ ಸುಖವಾಗಿರಿ ಹೀಗೆ...||
                ‌‌‌‌                               ||ಹೇಳುವೆ ನಿಮಗೀಗ||

(ಬಾನಾಡಿಗಳಂತೆ ಹಾರಾಡಿಕೊಂಡಿದ್ದ ಜನಕೆ
ಈ ದಿನಗಳು ಕಟ್ಟಿ ಹಾಕಿದಂತಾಗಿವೆ.
ಜನ ಬೇಸತ್ತು ಹೋಗಿದ್ದಾರೆ, ನಿಯಮ ವೀರುತ್ತಿದ್ದಾರೆ.
ಹಿಗಿದ್ದರೂ ನನ್ನ ಕೋರಿಕೆ:
ಬಂಧುಗಳೇ ನಿಮ್ಮ ಸುರಕ್ಷತೆಗಾಗಿ ಹೊರ ಬರಬೇಡಿ.
ಇನ್ನು ಕೆಲವೇ ದಿನ, ಕೊರೊನಾ ಸೋಂಕು ತೊಲಗಿಸೋಣ)

ಹೊರಗಡೆ ಬರಬೇಡಿ, ಜನಸಂದಣಿ ಸೇರಬೇಡಿ
ದೂರದಿಂದಲೇ ವ್ಯವಹರಿಸಿ|
ಇದ್ದೂರಲೇ ಇದ್ದು ಬಿಡಿ, ಪರವೂರಿಗೆ ಹೋಗದಿರಿ
ಈ ನಿಯಮ ಪಾಲಿಸುತ್ತಿರಿ|
ಇದರಿಂದ ನಿಮಗೊಳಿತು, ಕಡೆಗಣಿಸದಿರಿ ಮರೆತು
ಈ ಕೋರಿಕೆ.. ಈಡೇರಲಿ.. ನಿಮ್ಮಿಂದಲೇ ಹೀಗೆ...||
                                             ||ಹೇಳುವೆ ನಿಮಗೀಗ||


                              -ಡಾ.ರಾಜಶೇಖರ ಡೊಂಬರಮತ್ತೂರ


('ಗೀತಾ' ಚಿತ್ರದ "ಹೇಳುವೆ ನಿಮಗೀಗ, ದೂರದಲ್ಲಿ ಯಾರೋ..." ಹಾಡಿನ ಧಾಟಿಯಲ್ಲಿ)