ಗುರುವಾರ, ಜನವರಿ 28, 2021

ರಾಷ್ಟ್ರೀಯ ವಿಚಾರ ಸಂಕಿರಣ-೨೦೨೧ : ಪರಂಪರೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ

 

ಭಾರತದ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು: ಯಶವಂತ ಸರದೇಶಪಾಂಡೆ

(ದಿನಾಂಕ:೨೮ನೇ ಜನವರಿ ೨೦೨೧)

ಭಾರತವು ಕಲೆಯಲ್ಲಿ ವೈವಿಧ್ಯತೆಯನ್ನು ಹೊಂದಿದ್ದು ಅದನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕು. ಬದಲಾದ ಸಂದರ್ಭದಲ್ಲಿ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ನಮ್ಮ ಪರಂಪರಾಗತ ಕಲೆಗಳನ್ನು ಕಟ್ಟುವ ಕ್ರಿಯೆ ಯುವಕರಿಂದಾಗಬೇಕೆಂದು ಎಚ್ಚರಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಹಾಗೂ ಸಂಶೋಧನೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿ  ಉದ್ಘಾಟನಾ ಮಾತುಗಳನ್ನಾಡಿದ ಯಶವಂತ ಸರದೇಶಪಾಂಡೆ ಅವರು ಮಾತನಾಡುತ್ತಾ  ನಮ್ಮ ಪರಂಪರಾಗತ ಕುಲಕಸುಬುಗಳಲ್ಲಿಯ ಜ್ಞಾನ ಮತ್ತು   ವೈಜ್ಞಾನಿಕತೆಯನ್ನು ತಿಳಿಸಿ; ಇಂಥಹವುಗಳನ್ನು ಉಳಿಸಿ ಬೆಳಿಸುವ ಕಾರ್ಯ ವಿಶ್ವವಿದ್ಯಾಲಯದಿಂದ ಅಗಬೇಕೆಂದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು  ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಅಕ್ಷರ ಜ್ಞಾನವೇ ಶ್ರೇಷ್ಠ ಎಂದು ತಿಳಿದಿದ್ದೇವೆ. ಆದರೆ ಅಕ್ಷರಸ್ಥರಕ್ಕಿಂತ ಅನಕ್ಷರಸ್ಥರ ಜ್ಞಾನ ಶ್ರೇಷ್ಠವಾದದ್ದು. ಅನಕ್ಷರಸ್ಥರ ಜ್ಞಾನಕ್ಕೆ ಗೌರವ ಕೊಡುವ ಪರಂಪರೆ ಬರಬೇಕು. ಒಂದು ಅವಕಾಶ ಸರಕಾರ ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿದೆ  ಎಂದು ಪ್ರಶಂಸಿಸಿದರು. ಜನಪದ ಕಲಾವಿದರಾದ ಶರೀಫ್ ಮಾಕಪ್ಪನವರ ಮತ್ತು ಅವರ ತಂಡ ಹಾಡಿದ ನಾಡಗೀತೆಯೊಂದಿಗೆ ಆರಂಭಾದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸುನಂದಾ ಕಳಕನ್ನವರ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿ ಕಾರ್ಯಕ್ರಮವನ್ನು ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಹಮ್ಮಿಕೊಂಡ ಉದ್ದೇಶ ಮತ್ತ ಪರಂಪರೆಯ ಮಹತ್ವವನ್ನು ತಿಳಿಸಿದರುನಂತರ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಶ್ರೀನಿವಾಸ ಬಳ್ಳಿ ಮತ್ತು ಶ್ರೀ ಹರ್ಷವರ್ಧನ ಶೀಲವಂತ ಅವರಿಂದ   ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸಗಳು ನಡೆದವು.ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಎಲ್ಲರನ್ನು ಸ್ವಾಗತಿಸಿದರೆ,ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ  ಗೇಟಿಯವರು ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಧನಾತ್ಮಕ ಚಿಂತನೆ ಪ್ರಗತಿಗೆ ದಾರಿ: ರಘುನಂದನ

ಸಿಕ್ಕಂತ ಅವಕಾಶವನ್ನು  ಸರಿಯಾಗಿ ಬಳಸಿಕೊಂಡು ಅದರ ಮೂಲಕ ಪರಿಚಯವಾಗುವುದೇ ವ್ಯಕ್ತಿ ಪ್ರಗತಿ, ಅದುವೇ ಕ್ರೀಯಾತ್ಮಕತೆಯ ಚಟುವಟಿಕೆ. ನಿಟ್ಟಿನಲ್ಲಿ ದೇಶ ಭಕ್ತಿ ನಿರ್ಮಿತವಾಗಬೇಕು, ಒಂದು ಕ್ರಿಯೆ ನಮ್ಮ ಜನಪದರಲ್ಲಿದೆ. ಅವರು ಕ್ರಿಯಾತ್ಮಕ  ಬಗೆ ನೆಲ ಮೂಲವಾಗಿದ್ದು ತನ್ನ ಸುತ್ತಲದ ಪರಿಸರದಲ್ಲಿನ ವಸ್ತುಗಳನ್ನೇ ತನ್ನ ಪ್ರಗತಿಗೆ ಬಳಸಿಕೊಳ್ಳಾತ್ತಾರೆ. ಮೂಲಕ ಅವರು ತಮ್ಮತನವನ್ನು ಪ್ರತಿನಿಧಿಸುತ್ತಾರೆ ಇದು ರಾಷ್ಟ್ರೀಯತೆ ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಹಾಗೂ ಸಂಶೋಧನೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಘುನಂದನ ಅವರು ಸಮಾರೋಪ ಮಾತುಗಳನ್ನಾಡುತ್ತಾ  ಈಗ ಬದಲಾದ ಸಂದರ್ಭದಲ್ಲಿ ಪರಂಪರಾಗತ ಜ್ಞಾನವನ್ನು ಹೇಗೆ ಬಳಸಿಕೊಳ್ಳುಬೇಕು ಎಂಬುದನ್ನೂ  ಶೋಧಿಸಿ ಕ್ರೀಯಾತ್ಮಕಗೊಳಿಸಿಕೊಳ್ಳಬೇಕು ಮೂಲಕ ನವಭಾರತ ಕಟ್ಟಬೇಕೆಂದರು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎನ್.ಎಮ್.ಸಾಲಿ ಅವರು ಮಾತನಾಡುತ್ತಾ ಜನಪದರ ಜ್ಞಾನ ಎನ್ನುವಂತಹದು ವಿಶಾಲವಾದದ್ದು ಇದರ ಜ್ಞಾನ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ರಾಷ್ಟ್ರ ಪ್ರಜ್ಞೆಯನ್ನು ಹೊಂದಿದಂತೆಯೇ ಎಂದರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು  ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ನಮ್ಮ ಜನಪದರ ಅನುಭವ ಜ್ಞಾನವೇ ಒಂದು ಶಿಕ್ಷಣ. ದೇಶಿ ಶಿಕ್ಷಣಕ್ಕೆ ನಾವು ತೆರೆದುಕೊಳ್ಳಬೇಕೆಂದರು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸುನಂದಾ ಕಳಕನ್ನವರ ಅವರು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಉತ್ತಮ ಅವರು ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನು ಸ್ವಾಗತಿಸಿದರು. ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಎಲ್ಲರಿಗೂ  ವಂದಿಸಿದರು. ಡಾ.ವಿಜಯಲಕ್ಷ್ಮೀ  ಗೇಟಿಯವರು ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

                                                                                                                                                                                    ವರದಿ: ಡಾ.ನದಾಫ್ ಹೆಚ್.ಹೆಚ್ ಹತ್ತಿಮತ್ತೂರ

ಹಕ್ಕು ಮತ್ತು ಕರ್ತವ್ಯಗಳ ಪರಿಜ್ಞಾನವೇ ಪ್ರಜಾಗಣತಂತ್ರದ ಉದ್ದೇಶ: ಪ್ರೊ.ಡಿ.ಬಿ.ನಾಯಕ

       

  "ನಮ್ಮ ದೇಶಕ್ಕೆ  ಹಿರಿಯರ ಶ್ರಮದಿಂದ ಸ್ವಾತಂತ್ರ್ಯ ಸಿಕ್ಕು ಉತ್ತಮ ಸಂವಿಧಾನ ಸಂದಿದೆ. ಇಂಥಹ  ಸಂವಿಧಾನದ  ಸತ್ವವನ್ನು ಅರ್ಥೈಸಿಕೊಂಡು ನಡೆಯುವಲ್ಲಿ ನಾವು ಸೋತಿದ್ದೇವೆ. ಕೇವಲ ಹಕ್ಕಿಗಾಗಿಯೇ ಹೊರಾಡುತ್ತೇವೆ ಹೊರತು ಕರ್ತವ್ಯಗಳ ಅರಿವನ್ನೆ ಮರೆತಿದ್ದೇವೆ. ಜಪಾನಿನಂತಹ ಸಣ್ಣ ಸಣ್ಣ ರಾಷ್ಟ್ರದ ಜನರು ತಮ್ಮ ಕರ್ತವ್ಯದ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಮುನ್ನೆಡಿಸಿದ್ದನ್ನು ಕಾಣುತ್ತವೆ. ಯಾವುದೇ ತರಹದ ಮುಷ್ಕರ ಮಾಡಬೇಕಾದರೆ ದಿನ ಅವರು ಕೈಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ದಿನದಕ್ಕಿಂತ ಹೆಚ್ಚಿಗೆ ಕೆಲಸ ಮಾಡುವುದನ್ನು ಕಾಣುತ್ತವೆ. ನಮ್ಮಲ್ಲಿ ರಾಷ್ಟ್ರದ ಸಂಪತ್ತನ್ನು ಹಾಳು ಮಾಡುವುದೇ ಮುಷ್ಕರ ಎನ್ನುವಂತಾಗಿದೆ. ಹಿನ್ನೆಲೆಯಲ್ಲಿ ಆಲೋಚಿಸಿದಾಗ ದೇಶ ಕಟ್ಟಲು ನಿಜವಾದ ಕರ್ತವ್ಯಗಳನ್ನೆ ಮರೆತಿರುವುದು ಭಾರತೀಯ ಪ್ರಜೆಗಳ ಮನೋಸ್ಥಿತಿಯಾಗಿದೆಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ.ನಾಯಕ ಅವರು ಹೇಳಿದರು

             

                                                       72ನೇ ಗಣರಾಜ್ಯೋತ್ಸವವನ್ನು ಮಾನ್ಯ ಕುಲಪತಿಗಳು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ೭೨ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಾ  ಜಗತ್ತಿನಲ್ಲಿಯೇ ನಮ್ಮ ಸಂವಿಧಾನ ವಿಶಿಷ್ಟವಾಗಿದ್ದು ಸರ್ವಜಾತಿ, ಸಮುದಾಯ, ಧರ್ಮಗಳ ಬದುಕಿಗೆ ದಾರಿದೀಪವಾಗಿದೆ. ಸರ್ವೋದಯ ಸಮತಾ ಸಮಾಜಕಟ್ಟಲು  ಬುನಾದಿಯಾದ ಸಂವಿಧಾನವನ್ನು ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧಿಕ ಶ್ರಮವಿದೆ ಎಂಬುದನ್ನು ನಾವು ಯಾರೂ ಮರೆಯಬಾರದೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಎನ್.ಎಮ್.ಸಾಲಿಯವರು ಮತ್ತು ಸಹಾಯಕ ಕುಲಸಚಿವರಾದ ಶ್ರೀ ಶಹಜಾನ ಮುದಕವಿಯವರು ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಯವರುಗಳು ಉಪಸ್ಥಿತರಿದ್ದರು.

                                                                        ವರದಿ: ಡಾ.ನದಾಫ್ ಹೆಚ್.ಹೆಚ್ ಹತ್ತಿಮತ್ತೂರ