"ನಮ್ಮ ದೇಶಕ್ಕೆ ಹಿರಿಯರ ಶ್ರಮದಿಂದ ಸ್ವಾತಂತ್ರ್ಯ ಸಿಕ್ಕು ಉತ್ತಮ ಸಂವಿಧಾನ ಸಂದಿದೆ. ಇಂಥಹ ಸಂವಿಧಾನದ ಸತ್ವವನ್ನು ಅರ್ಥೈಸಿಕೊಂಡು ನಡೆಯುವಲ್ಲಿ ನಾವು ಸೋತಿದ್ದೇವೆ. ಕೇವಲ ಹಕ್ಕಿಗಾಗಿಯೇ ಹೊರಾಡುತ್ತೇವೆ ಹೊರತು ಕರ್ತವ್ಯಗಳ ಅರಿವನ್ನೆ ಮರೆತಿದ್ದೇವೆ. ಜಪಾನಿನಂತಹ ಸಣ್ಣ ಸಣ್ಣ ರಾಷ್ಟ್ರದ ಜನರು ತಮ್ಮ ಕರ್ತವ್ಯದ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಮುನ್ನೆಡಿಸಿದ್ದನ್ನು ಕಾಣುತ್ತವೆ. ಯಾವುದೇ ತರಹದ ಮುಷ್ಕರ ಮಾಡಬೇಕಾದರೆ ಆ ದಿನ ಅವರು ಕೈಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ದಿನದಕ್ಕಿಂತ ಹೆಚ್ಚಿಗೆ ಕೆಲಸ ಮಾಡುವುದನ್ನು ಕಾಣುತ್ತವೆ. ನಮ್ಮಲ್ಲಿ ರಾಷ್ಟ್ರದ ಸಂಪತ್ತನ್ನು ಹಾಳು ಮಾಡುವುದೇ ಮುಷ್ಕರ ಎನ್ನುವಂತಾಗಿದೆ. ಹಿನ್ನೆಲೆಯಲ್ಲಿ ಆಲೋಚಿಸಿದಾಗ ದೇಶ ಕಟ್ಟಲು ನಿಜವಾದ ಕರ್ತವ್ಯಗಳನ್ನೆ ಮರೆತಿರುವುದು ಭಾರತೀಯ ಪ್ರಜೆಗಳ ಮನೋಸ್ಥಿತಿಯಾಗಿದೆ"
ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ.ನಾಯಕ ಅವರು ಹೇಳಿದರು.
72ನೇ ಗಣರಾಜ್ಯೋತ್ಸವವನ್ನು ಮಾನ್ಯ ಕುಲಪತಿಗಳು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ೭೨ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಾ ಜಗತ್ತಿನಲ್ಲಿಯೇ ನಮ್ಮ ಸಂವಿಧಾನ ವಿಶಿಷ್ಟವಾಗಿದ್ದು ಸರ್ವಜಾತಿ, ಸಮುದಾಯ, ಧರ್ಮಗಳ ಬದುಕಿಗೆ ದಾರಿದೀಪವಾಗಿದೆ. ಸರ್ವೋದಯ ಸಮತಾ ಸಮಾಜಕಟ್ಟಲು ಬುನಾದಿಯಾದ ಈ ಸಂವಿಧಾನವನ್ನು ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧಿಕ ಶ್ರಮವಿದೆ ಎಂಬುದನ್ನು ನಾವು ಯಾರೂ ಮರೆಯಬಾರದೆಂದು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಎನ್.ಎಮ್.ಸಾಲಿಯವರು ಮತ್ತು ಸಹಾಯಕ ಕುಲಸಚಿವರಾದ ಶ್ರೀ ಶಹಜಾನ ಮುದಕವಿಯವರು ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಯವರುಗಳು ಉಪಸ್ಥಿತರಿದ್ದರು.
ವರದಿ: ಡಾ.ನದಾಫ್ ಹೆಚ್.ಹೆಚ್ ಹತ್ತಿಮತ್ತೂರ


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ