ಗುರುವಾರ, ನವೆಂಬರ್ 26, 2020

ನಮ್ಮ ಸಂವಿಧಾನ ಆಶಯ ಕಡತದಲ್ಲಿ ಮಾತ್ರ: ಪ್ರೊ. ಯಮುನಾ ಕೆ

ನಮ್ಮ ಸಂವಿಧಾನ ಆಶಯ ಕಡತದಲ್ಲಿ ಮಾತ್ರ: ಪ್ರೊ. ಯಮುನಾ ಕೆ. 

    "ಭಾರತದ  ಸಂವಿಧಾನ  ಪ್ರಪಂಚದಲ್ಲಿಯೇ ಶ್ರೇಷ್ಠವಾಗಿದ್ದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕರ್ತವ್ಯಗಳನ್ನು  ಡಾ.ಬಿ.ಆರ್ ಅಂಬೇಡ್ಕರ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅದು ಕಡತಗಳಲ್ಲಿ ಮಾತ್ರ ಉಳಿದುಕೊಂಡಿದ್ದು, ಸಮರ್ಪಕವಾಗಿ ಅನ್ವಯವಾಗಿಲ್ಲ ಎನ್ನುವುದು ವಿಷಾದದ ಸಂಗತಿ" ಎಂದು ಬಂಕಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಂಶುಪಾಲರಾದ ಪ್ರೊ.ಕೆ ಯಮುನಾ ಅವರು ಹೇಳಿದರು.    

ಕ.ಜಾ.ವಿ..ವಿ  ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ 'ಸಂವಿಧಾನ ಸಮರ್ಪಣಾ ದಿನ'ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ 
ಬಂಕಾಪುರ ಸ.ಪ್ರ.ದ ಕಾಲೇಜಿನ  ಪ್ರಾಂಶುಪಾಲರಾದ ಪ್ರೊ.ಕೆ ಯಮುನಾ ಅವರು ಮಾತನಾಡಿದರು. 

    ಇವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ 'ಸಂವಿಧಾನ ಸಮರ್ಪಣಾ ದಿನ'ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ "ಸ್ವಾತಂತ್ರ್ಯ, ಸಮಾನತೆ, ಭಾತೃತ್ವ  ಎನ್ನುವ ಪರಿಕಲ್ಪನೆಗಳು ಹಿಂದುಳಿದ ಜನಸಾಮಾನ್ಯರ ಪಾಲಿಗೆ  ದೂರ ಉಳಿದುಕೊಂಡಿವೆ" ಎಂದರು. 


ಕ.ಜಾ.ವಿ.ವಿ ಯ ಮಲ್ಲಿಗೆ ದಂಡೆ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾದ ಶ್ರೀಮತಿ. ಯಮುನಾ ಕೆ ಹಾಗೂ ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ, ಸಹಾಯಕ ಕುಲಸಚಿವರಾದ ಶ್ರೀ.ಶಹಜಹಾನ್ ಮುದಕವಿ, 
 ಸಂಶೋಧನಾಧಿಕಾರಿಗಳಾದ ಡಾ.ಪ್ರೇಮಕುಮಾರ, ಸಹಾಯಕ  ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ  ಗೇಟಿಯವರ  ಉಪಸ್ಥಿತರಿದ್ದರು 

    ವಿಶ್ವವಿದ್ಯಾಲಯದ ಸಂಶೋಧನಾಧಿಕಾರಿಯಾದ ಡಾ.ಪ್ರೇಮಕುಮಾರ ಮಾತನಾಡುತ್ತಾ "ಈಗಿನ ನ್ಯಾಯಾಲಯಗಳು ಸಹ ಸಂವಿಧಾನದ ಅಡಿಯಲ್ಲಿ  ತಿರ್ಮಾನ ನೀಡುತ್ತಿವಿಯೇ? ಎನ್ನುವುದು ಪ್ರಶ್ನಾರ್ಥಕವಾಗಿವೆ. ಯಾರಿಗೆ ನ್ಯಾಯ ಸಿಗಬೇಕಿತ್ತೊ ಅವರಿಗೆ ಸಿಗುತ್ತಿಲ್ಲ" ಎಂದರು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿಕೊಂಡು ಅಧ್ಯಕ್ಷೀಯ  ಮಾತುಗಳನ್ನಾ ಡಿದ  ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎನ್.ಎಮ್. ಸಾಲಿ ಅವರು ಮಾತನಾಡುತ್ತಾ  "ಮಹಾನಾಯಕ ಅಂಬೇಡ್ಕರ್  ಅವರು ವ್ಯಕ್ತಿ ಅಲ್ಲ; ಅದೊಂದು ಶಕ್ತಿ. ಆ ಶಕ್ತಿಯ  ಜ್ಞಾನವನ್ನು  ನಾವು ಯಾರೂ ಸಮರ್ಪಕವಾಗಿ ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದೇವೆ" ಎಂದರು. 

    ವಿಶ್ವವಿದ್ಯಾಲಯದ ಸಹಾಯಕ  ಕುಲಸಚಿವರಾದ ಶ್ರೀ. ಶಹಜಹಾನ ಮುದಕವಿ ಅವರು ಪ್ರಾಸ್ತಾವಿಕ ಮಾತುಗಳನ್ನು  ಆಡಿದರು. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದಪ್ಪ ಜೋಗಿ ಯವರು ಪ್ರಾರ್ಥಿಸಿದರು. ಸಹಾಯಕ  ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ  ಗೇಟಿಯವರ ಅವರು ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ರಾಜಶೇಖರ ಡೊಂಬರಮತ್ತೂರ ಅವರು ಎಲ್ಲರಿಗೂ ವಂದಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

                                                         ವರದಿ: ಡಾ.ನದಾಫ್ ಎಚ್.ಎಚ್ ಹತ್ತಿಮತ್ತೂರ